Saw this climber, Clematis Mandschurica or Manchurian Clematis or Bridal Bouquet in my sister’s mom-in-law’s garden. Manchurian Clematis is a climber that needs no special care at all except watering. You must see this climber during May-June, when the entire plant will bear those white flowers! They are just awesome! My amma fell in love with this climber and now it is in her garden. Flowering season is already over. But, you dont worry! I have clicked some photos for you. Enjoy!
ಅಕ್ಕನ ಮನೆಗೆ ಹೋಗಿದ್ದ ಒಂದು ದಿನ. ಬಳ್ಳಿ ತುಂಬ ಹೂಮುಡಿದು ನಿಂತ ಸಸಿಯೊಂದು ಅಮ್ಮನ ಕಣ್ಣಿಗೆ ಬಿತ್ತು. ಕಂಡದ್ದೇ, ಭಾಗ್ಯತ್ತೆ ಕೈಯಿಂದ ಒಂದು ಗೆಲ್ಲು ಸಂಪಾದಿಸಿ ತಂದು ನೆಟ್ಟಾಯಿತು. ಗೆಲ್ಲು ಚಿಗುರಿ ಹೂಬಿಡಲು ಶುರುವಾಯಿತು ನೋಡಿ! ನೋಡಲು ಕಣ್ಣಿಗೆ ಹಬ್ಬ! ಯಾವುದೇ ಗೊಬ್ಬರ ನೀಡದ, ಹೆಚ್ಚು ಆರೈಕೆ ಇಲ್ಲದೆ ನೀರು ಮಾತ್ರ ಬೇಡುವ (ಮಣ್ಣು ಬೇಕು!) ಗಿಡದ ತುಂಬ ನಕ್ಷತ್ರ ಹರಡಿದಂತೆ ಹೂಗಳ ರಾಶಿ! ಯಾವ ಗಿಡವೆಂದು ಕೇಳಿದಿರಾ? ಅದುವೇ Clematis Mandschurica ಅಥವಾ ಬ್ರೈಡಲ್ ಬೊಕೆ. ಬ್ರೈಡಲ್ ಬೊಕೆ ಎಂಬ ಹೆಸರು ಅಂತರ್ಜಾಲದಲ್ಲಿ ಮಾತ್ರ ಸಿಗಲಿಲ್ಲ, ಯಾಕೋ ಗೊತ್ತಿಲ್ಲ.
ಕೆಲವು ಫೋಟೋಗಳಿವೆ. ನೋಡಿ ಆನಂದಿಸಿ.