Watermelon Fruit

 

Do you remember the baby watermelon fruit? ಪುಟ್ಟ ಎಳೆ ಕಲ್ಲಂಗಡಿ ನೋಡಿದ ನೆನಪಿದೆಯಲ್ಲವೇ? Baby Watermelon Fruit bathed in the rain.
The fruit grew healthily until the creeper was attacked by insects. Insects attacked all the three watermelon creepers. I sprinkled basil juice over all the creepers. But, it had not control over those insects. I was helpless as the entire creeper affected by the insects and in turn, it started affecting the fruit growth. I watched the condition of the creeper daily. I hoped the creeper would help itself fighting against the insects in the absence of human interruption.
ಕಲ್ಲಂಗಡಿಮಿಡಿ ಬೆಳೆಯುತ್ತಾ ಇತ್ತು. ಒಂದು ದಿನ ನೋಡುತ್ತೇನೆ, ಒಂದು ಬಳ್ಳಿಯಲ್ಲಿ ಕೀಟಗಳ ಆಕ್ರಮಣ ಶುರುವಾಗಿತ್ತು. ಇದ್ದ ಎಲ್ಲಾ ಮೂರು ಕಲ್ಲಂಗಡಿ ಬಳ್ಳಿಗಳಿಗೂ ತುಳಸಿರಸ ಸಿಂಪಡಿಸಿದೆ. ಪ್ರಯೋಜನ ಕಾಣುವುದರ ಬದಲು ಮೂರೂ ಬಳ್ಳಿಗಳಿಗೆ ಕೀಟಗಳು ಹರಡಲು ಶುರುವಾಯಿತು. ತುಳಸಿರಸ ಎಷ್ಟು ಸಿಂಪಡಿಸಿದರೂ ಫಲ ಕಾಣಲೇ ಇಲ್ಲ. ಇನ್ನು ನಾನು  ದೂರ ನಿಂತು ಬಳ್ಳಿಗಳೇ ಸ್ವತಃ ರಕ್ಷಿಸಿಕೊಳ್ಳುವಂತೆ ನೋಡುವುದರ ಬಿಟ್ಟು ಬೇರೆ ದಾರಿ ಕಾಣಲಿಲ್ಲ. 

Baby Watermelon Fruit and creeper affected by insects.
I decided to pluck the fruit to save the creeper. I kept the baby watermelon in refrigerator. After a few days, the creepers succeeded in kicking off the insects. ಕಲ್ಲಂಗಡಿ ಮಿಡಿಯೂ ಬಾಡಲು ಶುರುವಾಯಿತು. ಇನ್ನು ಕಾದರೆ  ಬಳ್ಳಿಯೂ ಸಾಯಬಹುದೆಂದು  ಮನಸಿಲ್ಲದ ಮನಸಿನಿಂದ ಕಿತ್ತು ಫ್ರಿಡ್ಜ್ ನಲ್ಲಿ ಎತ್ತಿಟ್ಟೆ. ಸ್ವಲ್ಪ ದಿನದಲ್ಲಿ ಬಳ್ಳಿಗಳು ಚೇತರಿಸಿಕೊಳ್ಳಲಾರಂಭಿಸಿದವು!
I did not know what to do with the baby watermelon. One day I saw my baby watermelon had already started to shrink. I sliced it and was shocked to see that it was ripe! It was sweetened and the seeds were also darkened!  ಇನ್ನು, ಸುಕ್ಕು ಬರಲಾರಂಭಿಸಿದ ಆ ಎಳೆ ಕಲ್ಲಂಗಡಿ ಹಣ್ಣನ್ನು ಏನು ಮಾಡುವುದು? ಸುಮ್ಮನೆ ಇಬ್ಭಾಗ ಮಾಡಿ ನೋಡುತ್ತೇನೆ! ಆಶ್ಚರ್ಯ! ಕಾಯಿ ಬಲಿತಿದೆ! ಬೀಜ ಕಪ್ಪಾಗಿದೆ! ತಿಳಿತಿರುಳು ಸಿಹಿಯಾಗಿದೆ!
Watermelon fruit cut into halves reveals matured seeds and sweetened pulp.
I understood that the fruit stopped growing in size and matured all of a sudden as the creeper was attacked by the insects. After all, the aim was to continue its generation! ತಾನು ಬದುಕುವುದಕ್ಕಿಂತಲೂ ತನ್ನ ವಂಶ ಬೆಳೆಸುವುದೇ ಆ ಬಳ್ಳಿಗೆ ಮುಖ್ಯವಾಗಿತ್ತು! ಅದಕ್ಕಾಗಿಯೇ, ಹುಳುಹಿಡಿಯಲಾರಂಭಿಸಿದಾಗಲೇ ಎಳೆಕಾಯಿ ದೊಡ್ಡದಾಗುವುದನ್ನು ಮರೆತು ಬಲಿಯಲಾರಂಭಿಸಿತ್ತು!

About Sindhu

A nature lover and dreamer who expresses herself as an artist, fashion designer and blogger. Persued B.Sc fashion design at Karavali College (Mangaluru University 2003 - 2006) with first rank. Former lecturer for fashion designing at Gloria College, Puttur for five years (2006-2011). Blogger since 2013.

Your words make my day!