A creative word art – portrait of Sardar Vallabh Bhai Patel with एकता (ekatha) and ಏಕತೆ (ekathe) on the occasion of Ekatha Divas and Kannada Rajyotsava.
ಇಂದು ಕನ್ನಡ ರಾಜ್ಯೋತ್ಸವದ (೧ ನವೆಂಬರ್) ದಿನ ಪಟೇಲರು ತುಂಬಾ ನೆನಪಾಗುತ್ತಿದ್ದಾರೆ. ನಿನ್ನೆ ಭಾರತದ ಏಕೀಕರಣದ ರೂವಾರಿ ಸರ್ದಾರ್ ವಲ್ಲಭಭಾಯ್ ಪಟೇಲ್ ಜನ್ಮದಿನ (೩೧ ಒಕ್ಟೋಬರ್). ನೂರಾರು ಸಂಸ್ಥಾನಗಳನ್ನು ಭಾಷೆಯ ವೈವಿಧ್ಯತೆಯ ಹೊರತಾಗಿಯೂ ಭಾರತದ ತ್ರಿವರ್ಣ ಧ್ವಜದಡಿ ಒಗ್ಗೂಡಿಸಿದ ಖ್ಯಾತಿ ಪಟೇಲರದು.
“लोको भिन्न रुचि:” ಎಂದು ಜಗಕ್ಕೇ “ವಿವಿಧತೆಯಲ್ಲಿ ಏಕತೆ”ಯ ಮಾದರಿ ನಡೆ-ನುಡಿಯಾಡಿದ ಭಾರತೀಯರು ನಾವು. ಅಂದು ತೊಡಕಾಗದ ಭಾಷೆಗಳು ಇಂದೇಕೆ ಒಡಕು ಮೂಡಿಸುವ ರಾಜಕೀಯದಾಟದ ದಾಳಗಳಾಗಿವೆ? ಭಾರತೀಯ ಸೋದರ ಭಾಷೆಗಳನ್ನು ದ್ವೇಷಿಸುವ ನಮಗೆ ವಿದೇಶಿ ಭಾಷೆಗಳು ಅತಿಯಾಗಿ ಅಪ್ಯಾಯಮಾನವಾಗಿವೆಯಲ್ಲ, ಏಕೆ?
ಬಹುಶ: ಸಾಮಾನ್ಯಜನರು ನಾವು ಒಗ್ಗಟ್ಟಾದರೆ ಭಾಷೆಗಳು ಮತ್ತೆ ಮನಗಳನ್ನು ಬೆಸೆಯಬಹುದಲ್ಲ? ವಿಶ್ವದ ಭಾಷೆಗಳನ್ನೆಲ್ಲ ಪ್ರೀತಿಸೋಣ. ನಮ್ಮ ಸಂಸ್ಕ್ರತಿಯ ಕೊಂಡಿಗಳಾದ ನೆಲದ ಭಾಷೆಗಳನ್ನು ಕಲಬೆರಕೆಯಿಲ್ಲದೆ ನುಡಿದು ಬೆಳೆಸೋಣ. ಏನಂತೀರಿ?
ಕನ್ನಡಿಗರಿಗೆಲ್ಲ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 🙂 ಭಾಷೆಗಳು ಏಕತೆಯ ಸೇತುವೆಗಳಾಗಲಿ!
Beautiful sketch of Sardar Patel. Would have enjoyed this post more if there was an English translation accompanying this.
Thank you, SG 🙂 Wanted to add English version too, hope I will do it soon.