The Sun and the Moon – Some facts for thought | Yugadi thoughts | Solar and Lunar Yugadi Greetings

Some facts about the Sun and the Moon that play vital roles for creating environment for life on the Earth – thoughts for Chaandra Yugadi and Saura Yugadi/Vishu that are the beginnings of Lunar and Solar calendars respectively.

Digital Kannada Wordart - Bevu and Bella for Yugadi
Digital Kannada Wordart – Bevu and Bella for Yugadi

Who is greater – the Sun or the Moon?

Our immediate answer, probably, is the Sun. Because, the Sun gives us both light and life. As we all know, plants prepare food through photosynthesis using the sunlight. And, all other living beings are, directly or indirectly, dependants of plants for food. Even, the Earth’s revolution around the Sun and its rotation around its axis create a comfortable environment for us to live on the Earth. So, the Sun is very important for us. Then, what about the Moon? 

Do we need the Moon at all?

In addition to orbiting the Sun, the Earth spins on its tilted axis (which is about 23.4°). This influences the direction of the Earth’s poles towards the Sun at different times of a year. This is how the seasons are formed, right? Recent studies have revealed that, the Moon’s gravitational force stabilises the axis of the Earth. To add, the Earth’s day of 24 hours is also stabilised by the gravitational force of the Moon. If not, the Earth would have an unstable axis and shorter rotation about itself. This would result in unpredictable weather and shorter days making the Earth unsuitable for life. The Moon also influences water on the Earth perfectly so as to keep life on the Earth.

Possibly, civilisations across the world have understood the importance of both the Sun and the Moon. That’s why, millennia ago itself, they have valued the Sun, the Moon and the Earth. And that’s why, they have been following the scientific solar or/and lunar calendars. 

Lunar and Solar Calendar New Years

It’s the season of lunar and solar new years celebrated worldwide under different names. We Bharatiyas celebrate both Chaandra Yugadi (6th April this year) and Saura Yugadi (15th April this year). And, both are special to me. DeSi Abhivyakti’s blogversary is on Chandra Yugadi and Varnatantu’s blogversary is on Saura Yugadi. On this happy occasion, I wish you all a very prosperous new year. May the new year be joyful and successful!

ಸೂರ್ಯ ಹೆಚ್ಚೋ? ಚಂದ್ರ ಹೆಚ್ಚೋ?

ಈ ಪ್ರಶ್ನೆಗೆ ಬಹುಶಃ ನಾವೆಲ್ಲರೂ ಥಟ್ಟನೆ ಕೊಡುವ ಉತ್ತರ – ಸೂರ್ಯ. ಸೂರ್ಯನೇ ನಮಗೆ ಬೆಳಕನ್ನು ಕೊಡುವವನು, ಬದುಕನ್ನು ಕೊಡುವವನು. ಸೂರ್ಯನೇ ನಮ್ಮ ಕಣ್ಣಿಗೆ ಕಾಣುವ ಶಕ್ತಿಯ ಮೂಲ. ಸೂರ್ಯನೇ ಭೂಮಿಗೆ ಆಧಾರ. ನಮಗೆ ಗೋಚರಿಸುವಂತೆ/ಕಾಣಿಸುವಂತೆ ಸೂರ್ಯನಿಂದಲೇ ಹಗಲು-ರಾತ್ರಿ, ಋತುಚಕ್ರಗಳು.ಆದರೂ, ವೈಜ್ಞಾನಿಕ ಆಚರಣೆಗಳಿಗೆ ಹೆಸರಾದ ಭಾರತದ ಬಹುಭಾಗಗಳಲ್ಲಿ ಚಂದ್ರನನ್ನು ಕೇಂದ್ರೀಕರಿಸಿದ ಚಾಂದ್ರಮಾನ ಯುಗಾದಿಯ ಆಚರಣೆ ಇದೆ. ಏಕೆ ಹೀಗೆ? ಹುಡುಕುತ್ತಾ ಹೋದರೆ ಕಣ್ಣಿಗೆ ಕಾಣುವುದಕ್ಕಿಂತ ಹೆಚ್ಚಿನದು ತೆರೆದುಕೊಳ್ಳುತ್ತಾ ಹೋಗುತ್ತದೆ.

ನಮಗೆ ಚಂದಿರ ಯಾಕೆ ಬೇಕು?

ಸುಮಾರು ಇಪ್ಪತ್ತಮೂರುವರೆ ಡಿಗ್ರಿ ಓರೆಯಾಗಿ ತಿರುಗುತ್ತಿರುವ ಭೂಮಿ ಸೂರ್ಯನ ಸುತ್ತ ಪರಿಭ್ರಮಿಸುವುದರಿಂದಲೇ ಭೂಮಿಯಲ್ಲಿ ನಿಯಮಿತವಾದ, ಹಿತವಾದ ಋತುಚಕ್ರ ಉಂಟಾವುದು ಹೌದಲ್ಲ. ಆದರೆ, ಯಾವುದೋ ಕಾರಣದಿಂದ ಇಪ್ಪತ್ತಮೂರುವರೆ ಡಿಗ್ರಿಯಷ್ಟೇ ಓರೆಯಾಗಿರುವ ಭೂಮಿ, ಅದೇ ಓರೆ ಸ್ಥಿತಿಯಲ್ಲಿ ಸ್ಥಿರವಾಗಿರಲು ಚಂದ್ರನ ಗುರುತ್ವ ಶಕ್ತಿ ಕಾರಣ ಎಂದು ಖಗೋಳವಿಜ್ಞಾನ ಹೇಳುತ್ತದೆ. ಅದೇ ರೀತಿ, ಭೂಮಿಯಲ್ಲಿ ಹಗಲು -ರಾತ್ರಿಗಳಿರುವ ಇಪ್ಪತ್ತನಾಲ್ಕು ಗಂಟೆಗಳ ದಿನಗಳು ನಿಯಮಿತವಾಗಿ ಉಂಟಾಗಬೇಕಾದರೂ ಚಂದ್ರನ ಗುರುತ್ವಾಕರ್ಷಣ ಶಕ್ತಿಯ ನೆರವೇ ಬೇಕು. ಅಲ್ಲದೇ, ಚಂದ್ರನ ಕಾರಣದಿಂದ ಭೂಮಿಯಲ್ಲಿ ಸಾಗರದಲೆಗಳು ಉಂಟಾಗುವುದು ನಮಗೆ ಗೊತ್ತೇ ಇದೆ. ಇದರಂತೆಯೇ, ಭೂಮಿಯ ಮೇಲಿರುವ ಜೀವಿಗಳ ಶರೀರದಲ್ಲಿರುವ ನೀರು ಕೂಡಾ ಚಂದ್ರನಿಂದ ಪ್ರಭಾವಿತ ಎಂದು ಜ್ಯೋತಿರ್ವಿಜ್ಞಾನ ಹೇಳುತ್ತದೆ.

ಹೀಗಾಗಿಯೇ ಇರಬೇಕು, ಸೂರ್ಯ-ಚಂದ್ರರೆರಡೂ, ಆಚರಣೆ ಹೇಗೇ ಇರಲಿ, ಜನಪದರಿಗೆ ಸಮಾನವಾಗಿ ಪೂಜ್ಯರು. ಕೆಲವರಿಗೆ ಮಕರ ಸಂಕ್ರಾಂತಿಗೆ ಸುಗ್ಗಿ ಸಂಭ್ರಮ ಮತ್ತು ಚಾಂದ್ರಮಾನ ಯುಗಾದಿಗೆ ಹೊಸವರ್ಷದ ಆಚರಣೆ. ಇನ್ನು ಕೆಲವರಿಗೆ ಹೊಸಫಲ ತುಂಬುವ ಸೌರಯುಗಾದಿ ಹೊಸವರ್ಷವಾದರೂ ಕೂಡಾ ಚಾಂದ್ರಮಾನ ಮತ್ತು ಸೌರಮಾನಗಳೆರಡೂ ಮಿಳಿತವಾದ ಪಂಚಾಂಗವನ್ನೇ ಅವರು ಅನುಸರಿಸುವುದು.

ಚಾಂದ್ರಮಾನ ಮತ್ತು ಸೌರಮಾನ ಕಾಲಗಣನೆ

ಭೂಮಿಗೂ, ಜೀವಸಂಕುಲಕ್ಕೂ, ಸೂರ್ಯ-ಚಂದ್ರರೆರಡೂ ಆಧಾರ. ಅವುಗಳ ಆಧಾರದ ಕಾಲಗಣನೆ ನಿಖರ ಮತ್ತು ವೈಜ್ಞಾನಿಕ ಎಂಬುದು ಮಾನವ ಬಹಳ ಹಿಂದೆಯೇ ಕಂಡುಕೊಂಡ ಸತ್ಯ. ಅದಕ್ಕೆ ಅಲ್ಲವೇ ಪ್ರಪಂಚದಾದ್ಯಂತ ಬಹುತೇಕ ಸಂಸ್ಕೃತಿಗಳು ಸೌರಮಾನ ಅಥವಾ ಚಾಂದ್ರಮಾನ ಪದ್ಧತಿಯ ನವವರ್ಷಾಚರಣೆ ಮಾಡುವುದು?

ಯುಗಾದಿ

ಈ ಬಾರಿ ಗ್ರೆಗೋರಿಯನ್ ಕ್ಯಾಲೆಂಡರ್ ನ ಎಪ್ರಿಲ್ ಆರಕ್ಕೆ ಚಾಂದ್ರಮಾನ ಯುಗಾದಿ ಮತ್ತು ಎಪ್ರಿಲ್ ಹದಿನೈದಕ್ಕೆ ಸೌರ ಯುಗಾದಿ ಅಥವಾ ವಿಶು. ಸೌರಯುಗಾದಿ ಆಚರಿಸುವ ತುಳುನಾಡಿನವಳಾದ ನನಗೆ, ಹಬ್ಬಗಳ ಜೊತೆಗೆ ಕೆಲವು ಹುಟ್ಟು ಹಬ್ಬಗಳೂ ಸೇರಿ, ಎರಡೂ ಯುಗಾದಿಗಳೂ ಪ್ರಿಯ. ಚಾಂದ್ರಮಾನ ಯುಗಾದಿಗೆ ದೇಸಿ ಅಭಿವ್ಯಕ್ತಿಯ ಹುಟ್ಟು ಹಬ್ಬವಾದರೆ, ಸೌರಯುಗಾದಿಗೆ ವರ್ಣತಂತುವಿನ ಹುಟ್ಟು ಹಬ್ಬ. ಈ ಖುಷಿಯೊಂದಿಗೆ, ನಿಮಗೆಲ್ಲ ಚಾಂದ್ರಮಾನ ಹಾಗೂ ಸೌರಮಾನ ಯುಗಾದಿಯ ಶುಭಾಶಯಗಳು. ಹೊಸವರ್ಷ ಎಲ್ಲರಿಗೂ ಖುಷಿ ತರಲಿ. ಯುಗಾದಿಯ ಬೇವು-ಬೆಲ್ಲಗಳು, ಜೀವನದ ಏಳು-ಬೀಳುಗಳ ನಡುವೆ ಸಾಧನೆಗೆ ಬೇಕಾದ ಸಮಚಿತ್ತವ ಕೊಡಲಿ. ಮತ್ತೊಮ್ಮೆ ಹೊಸವರ್ಷದ ಶುಭಾಶಯಗಳು.

About Sindhu

A nature lover and dreamer who expresses herself as an artist, fashion designer and blogger. Persued B.Sc fashion design at Karavali College (Mangaluru University 2003 - 2006) with first rank. Former lecturer for fashion designing at Gloria College, Puttur for five years (2006-2011). Blogger since 2013.

3 Comments

  1. Interesting facts especially about moon. Thanks!

  2. Happy New Yea. Congratulations on your blogversary.

Your words make my day!