ನಿನ್ನ ಹೆಸರೇನು ಹೇಳೇ? – Cassia Javanica

– ಕಳೆದ ವರ್ಷ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಮಾವುಮೇಳದ ಸಂಭ್ರಮ. ಆಗಷ್ಟೇ ಮಳೆಗಾಲ ಇಣುಕಿತ್ತು ಬೆಂಗಳೂರಿನತ್ತ. ಹಸಿರ ನೋಡಿ ಆನಂದಿಸೋಣವೆಂದು ಹೊರಟರೆ ನಮ್ಮನ್ನು ಸ್ವಾಗತಿಸಿದ್ದು ಈ ಗುಲಾಬಿ ಬಣ್ಣದ ಮಂದಾರ (?) ಹೂವುಗಳು. ಮರತುಂಬಿ ನಿಂತ ಹೂಗಳ ದೃಶ್ಯ ಮನತುಂಬುವಂತಿತ್ತು. ಅರೆ! ಈ ಲಲನೆಯರ ಹೆಸರೇನು? ಬಾಲ್ಯದಲ್ಲಿ ಅಜ್ಜಿಯ ದೊಡ್ಡದಾದ ಹೂ ತೋಟದಲ್ಲಿ ದಿನವಿಡೀ ಆಟವಾಡುತ್ತ ಕೆಲವು ಅಪರೂಪದ ಹೂಗಿಡಗಳ ಪರಿಚಯವಾಗಿತ್ತು. ಶ್ವೇತವರ್ಣದ ಬಟ್ಟಲು ಮಂದಾರ, ದಟ್ಟ ಗುಲಾಬಿ ಬಣ್ಣದ ಪನ್ನೀರು ಮಂದಾರಗಳನ್ನು ಅಜ್ಜಿಯ ಹೂತೊಟದಲ್ಲಿಯೇ ನೋಡಿದ್ದು. ಅಂತರ್ಜಾಲದಲ್ಲಿ ಗೂಗಲಿಸಿದಾಗ ಸಿಕ್ಕಿದ್ದು…

Continue reading

ಆಹಾ! ನಮ್ಮೂರು… Coastal Karnataka

ಎಷ್ಟು ಚೆಂದ ನಮ್ಮೂರು! ನೋಡು ಒಂದು ಘಳಿಗೆ! ಆ ಪುಟ್ಟ ನದಿ, ನದಿಯ ಸುತ್ತ ಆವರಿಸಿದ ಹಸಿರು ಹೊದಿಕೆ, ತೆಂಗಿನ ಮರಗಳ ಸಾಲು, ಓಡ, ಹಕ್ಕಿ-ಪಿಕ್ಕಿಗಳು… ಇವೆಲ್ಲವುಗಳ ಪ್ರತಿಬಿಂಬ ಶುಭ್ರ ಸ್ಫಟಿಕ ಜಲಧಿಯೊಳಗೆ!! ತಿಂಗಲುಗಳ ಹಸಿರ ಹಸಿವು ತೀರಿಸುವ ಆಸೆ ನಮ್ಮ ಕಂಗಳಿಗೆ… ತನ್ನೊಳಗೆ ಸೆರೆಯಾಗಿಸುವ ಆಸೆ ಈ ಕ್ಯಾಮೆರಾ ಕಣ್ಣಿಗೆ! Captured this heavenly beauty of coastal Karnataka on 18.05.2013 at 6.55am from inside the moving Volvo…

Continue reading