ರಾಮ ತುಳಸಿ ಹೂ ಬಿಟ್ಟಾಗ… The Holy Basil Blooms!
ಪ್ರಿಯ ಕಲಾಪ್ರೇಮಿ, ಇದು The Arts & Me ಯಲ್ಲಿ 100 ನೇ ಪತ್ರ. ಸ್ವಗತದಲ್ಲೇ ಹೆಚ್ಚಾಗಿ ಬರೆಯುವ ನಾನು ನಿಮ್ಮನ್ನುದ್ದೇಶಿಸಿ ಬರೆಯುತ್ತಿರುವ (ಬಹುಶಃ) ಮೂರನೆಯ ಪತ್ರ. ಇಲ್ಲಿವರೆಗೆ ನನ್ನನ್ನು The Arts & Me ಯಲ್ಲಿ ಪ್ರತಿದಿನ ಭೇಟಿ ಮಾಡಿ, ಮನಸ್ಸು ತೋಚಿದಂತೆ ಗೀಚಿದ್ದನ್ನು, ಕ್ಲಿಕ್ಕಿಸಿದ್ದನ್ನು ತುಂಬು ಮನಸ್ಸಿನಿಂದ ಪ್ರೋತ್ಸಾಹಿಸುತ್ತಿರುವ; ನೂರನೇ ಅಂಚೆಯವರೆಗೂ ನನ್ನ ಉತ್ಸಾಹ ಬೆಳೆಸಿದ ಪ್ರಿಯ ಕಲಾಪ್ರೇಮಿ, ನಿಮಗೆ ನನ್ನ ಧನ್ಯವಾದಗಳು. ಕೆಲವು ದಿನಗಳಿಂದ ನನಗೆ ನಾನೇ ನಿಯಮಗಳನ್ನು ಹಾಕಿಕೊಳ್ಳುವ ಯೋಚನೆ…