ರಜಾ ಮಜಾ … A Day in The Nature!
ನಮಸ್ತೆ ! ಆರಾಮವೇ ? ಇಂದಿನ e-ಅಂಚೆಗಾಗಿ ನಿನ್ನೆಯೇ ತಯಾರಿ ಮುಗಿದಿತ್ತು. ಬೆಳಗಿನ ಕೆಲಸಗಳು ಮುಗಿಯುತ್ತಿದ್ದಂತೆ, ಅಚಾನಕ್ಕಾಗಿ ಕಿಟಕಿಯಾಚೆಗೆ ದೃಷ್ಟಿ ಹೊಯಿತು. ಅರೆ! ಖಾಲಿ ಹಾಳೆಯ ಮೇಲೆ ಬಣ್ಣ ಎರಚಿದಂತೆ ನೀಲಿ ಆಗಸದಲ್ಲಿ ಪ್ರಕೃತಿ ಓಕುಳಿಯಾಡತೊಡಗಿದಂತಿತ್ತು. ಒಳಗೋಡಿ, ಕ್ಯಾಮರಾ ಹೊರತೆಗೆದು ನನ್ನ ಕೆಲಸ ಶುರುಮಾಡಿದೆ. ಹೊತ್ತೇರುತ್ತಿದ್ದಂತೆ ಆ ಮೋಡಗಳ ಆಟಕ್ಕಿನ್ನೂ ರಂಗೇರುತ್ತಲೇ ಹೋಯಿತು. ಅಬ್ಬ! ಅತ್ಯದ್ಭುತ! ಮಕ್ಕಳಿಗೆಲ್ಲಾ ಬೇಸಿಗೆ ರಜೆ ಇರುವಂತೆ ಈ ಮೋಡಗಳು, ಗಾಳಿ, ಸೂರ್ಯ, ಈ ಪ್ರಕೃತಿ ಈ ದಿನ ರಜಾ ಮಜಾದಲ್ಲಿದ್ದಂತೆ! ನನ್ನಲ್ಲೂ ಹೊಸ ಹುರುಪು! ಇಂದಿನವರೆಗೆ ಕಂಡಿಲ್ಲದ…